ಆಡುವ ಗೊಂಬೆ (ಇಂಗ್ಲೀಷ್: ) 2019ರ ಎಸ್. ಕೆ. ಭಗವಾನ್ ನಿರ್ದೇಶನದ ಕನ್ನಡ ಭಾಷೆಯ ಚಿತ್ರ. 22 ವರ್ಷದ ಬಳಿಕ ಭಗವಾನ್ ಅವರು ನಿರ್ದೇಶನಕ್ಕೆ ಮರಳಿದರು. ಕಸ್ತೂರಿ ನಿವಾಸ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿರುವ ಈ ಚಿತ್ರವನ್ನು ಶಿವಪ್ಪ.ಎ ಮತ್ತು ವೇಣುಗೋಪಾಲ್.ಕೆ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಸಂಚಾರಿ ವಿಜಯ್ ಮತ್ತು ರಿಷಿತಾ ಮಲ್ನಾಡ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಅನಂತ್ ನಾಗ್, ಸುಧಾ ಬೆಳವಾಡಿ ಮತ್ತು ಇತರರು ಇದ್ದಾರೆ . ಚಿತ್ರದ ಹಿನ್ನಲೆ ಸಂಗೀತ ಮತ್ತು ಧ್ವನಿಪಥವನ್ನು ಹೇಮಂತ್ ಕುಮಾರ್ ಮತ್ತು ಛಾಯಾಗ್ರಹಣವನ್ನು ಗಣೇಶ್ ಸಂಯೋಜಿಸಿದ್ದಾರೆ. ಈ ಚಿತ್ರವು 4 ಜನವರಿ 2019 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಯಿತು ಮತ್ತು ಈ ಚಿತ್ರ ಕನ್ನಡ ಚಿತ್ರರಂಗದ ವರ್ಷದ ಮೊದಲ ಬಿಡುಗಡೆ. == ಪಾತ್ರವರ್ಗ == ಮಾಧವನಾಗಿ ಸಂಚಾರಿ ವಿಜಯ್ ಕಿಶನ್ ಆಗಿ ಅನಂತ್ ನಾಗ್ ರಿಶಿತಾ ಮಲ್ನಾಡ್ ರುಕ್ಮಿಣಿಯಾಗಿ ಸುಧಾ ಬೆಳವಾಡಿ ನಿರೋಶಾ ಶೆಟ್ಟಿ == ಧ್ವನಿಪಥ == ಹೇಮಂತ್ ಕುಮಾರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಧ್ವನಿಸುರುಳಿ 26 ಅಕ್ಟೋಬರ್ 2018 ರಂದು ಅಭಿಮಾನಿಗಳ ನಡುವೆ ಬಿಡುಗಡೆಯಾಯಿತು ಮತ್ತು ಇದು ನಟ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಆಡಿಯೊ ಲೇಬಲ್‌ನ ಒಡೆತನದಲ್ಲಿದೆ. ಮೂವರು ಸಹೋದರರಾದ ಶಿವ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಮತ್ತು ಅವರ ಸೋದರಸಂಬಂಧಿ ನಟ ವಿಜಯ್ ರಾಘವೇಂದ್ರ ಅವರು ಹಾಡುಗಳಿಗೆ ಧ್ವನಿ ನೀಡಿದ್ದಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅಡುವಾ ಗೊಂಬೆ ಅಧಿಕೃತ ಪುಟ